Thursday, June 18, 2015

ಹೃದಯ ಸ್ಪರ್ಶಿ ವಿದಾಯಕೂಟ

ಅಡೂರು ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವ ವ್ಯಕ್ತಿಯನ್ನು ಸಮಾಜ ಗೌರವಿಸುತ್ತದೆ. ಉದ್ಯೋಗದಿಂದ ವರ್ಗಾವಣೆ ಗೊಂಡರೂ , ನಿವೃತ್ತರಾದರೂ, ಅಂಥ ಉದ್ಯೋಗಿಗಳನ್ನು ಜನರು ನೆನೆಪಿಸಿಕೊಳ್ಳುತ್ತಾರೆ. ಎದು ಚನಿಯ ಮಾಸ್ತರರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಶ್ರೀ ಬಾಲಕೃಷ್ಣ ಶೆಟ್ಟಿಗಾರರು ಹೇಳಿದರು.ಅಡೊರು ಹಿರಿಯ ಪ್ರೌಢಶಾಲೆಯಿಂದ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ನಿರ್ಗಮಿಸಿದ ಚೆನಿಯ ನಾಯ್ಕರನ್ನು   ಶಾಲೆಯಲ್ಲಿ ಹೃದಯ ಸ್ಪರ್ಶಿ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
        ಹಿರಿಯ ಶಿಕ್ಷಕಿ ಶ್ರೀಮತಿ ಪ್ರಸನ್ನ ಕುಮಾರಿಯವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶ್ರೀ ರಾಮಣ್ಣ ಮಾಸ್ಟರ್, ಶ್ರೀ ಮತಿ ಪದ್ಮಾ ಯಚ್, ಶ್ರೀ ಕೃಷ್ಣಪ್ಪ ಮಾಸ್ತರ್, ಮೊದಲಾದರವರು ಶುಭಾಶಂಸನೆ ಮಾಡಿದರು.
      ಶಾಲಾ ಸಿಬ್ಬಂದಿ ಸಂಘದ ಕಾರ್ಯದರ್ಶಿ ಶ್ರೀ ಅಬ್ದುಲ್ ಸಲಾಂ ರವರು ಸ್ವಾಗತಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಶ್ರೀ ಸತ್ಯಶಂಕರರು ಧನ್ಯವಾದ ಸಮರ್ಪಿಸಿದರು.

No comments:

Post a Comment