ವಿದ್ಯೆಯ
ಕಲಿತು ದೊಡ್ಡವಳಾಗಿ
ಕವಿತೆಯ
ನಾನು ರಚಿಸುವೆನು
ಅಂದದ
ಚಂದದ ಹಾಡನು ಬರೆದು
ಜನಗಳ
ಮೆಚ್ಚುಗೆ ಪಡೆಯುವೆನು ||
ವಿದ್ಯೆಯ
||
ಹಿರಿಯರು
ಹೇಳಿದ ನೀತಿಯ ಮಾತನು
ಒಂದೊಂದಾಗಿ
ತಿಳಿಯುವೆನು
ತಂದೆ
ತಾಯಿಗಳು ದೇವರು ಎ೦ಬ
ಮಮತೆಯ
ನುಡಿಯನು ಅರಿಯುವೆನು ||
ವಿದ್ಯೆಯ
||
ಗುರುಗಳು
ಹೇಳಿದ ಪಾಠವ ಕಲಿತು
ವಿದ್ಯಾವಂತೆ
ಎ೦ದೆನಿಸುವೆನು
ನಿಸರ್ಗ
ನೀಡುವ ಚೆಲುವನು ಕಂಡು
ಕವನವ
ನಾನು ಬರೆಯುವೆನು ||
ವಿದ್ಯೆಯ
||
ದೇಶದ
ಜನರೆಲ್ಲರು ಮೆಚ್ಚುವ
ಕವಿಯು
ನಾನಾಗುವೆನು ||
ವಿದ್ಯೆಯ
||
ಅರ್ಥ
ಮಾತನಾಡುವ
ಮಾತಿಗಿರಲಿ ಒಂದು ಅರ್ಥ
ಆ
ಶಬ್ಧಕ್ಕೆ ಬೇಕು ಒಂದು ವಿಶಾಲಾರ್ಥ
ಜನಗಳಿಗೆ
ಆದರೆ ಅಪಾರ್ಥ
ಆಗುವುದು
ಎಲ್ಲ ಅನರ್ಥ
NICE KAVITHE.....
ReplyDelete