"ಮಾನವನ
ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ
ಶಕ್ತಿ ಭೂಮಿಗಿದೆ. ಆದರೆ
ಅವನ ದುರಾಸೆಗಳನ್ನಲ್ಲ"
ಎ೦ಬ
ಮಾತು ಪ್ರಾನ್ಸ್ ನ ಬೇಕನ್ ಎ೦ಬ
ತತ್ವಜ್ಞಾನಿಯ ಮಾತು ಮನುಷ್ಯನ
ಅಂತರಾಳವನ್ನು ಹೊಕ್ಕಿಲ್ಲ.
ಪ್ರಾಕೃತಿಕ ಅಸಮತೋಲನಕ್ಕೆ
ಮಾನವನ ದುರಾಸೆಯೇ ಮೂಲ ಕಾರಣವಾಗಿದೆ.
ಹಣದ ಆಸೆಗೋಸ್ಕರ ಹಣದ
ಬೆನ್ನು ಹತ್ತುತ್ತಿರುವ ಮಾನವ
ಪ್ರಕೃತ್ತಿಯನ್ನು ನಾಶಗೈಯುತ್ತಾ
ಅಟ್ಟಹಾಸ ಮೆರೆಯುತ್ತಿದ್ದಾನೆ.
ಗಣಿಗಾರಿಕೆ,
ಮರಳುದಂಧೆ, ಅರಣ್ಯಲೂಟಿ,
ನೀರಿನ ಮಾರಾಟ,
ಇವುಗಳನ್ನೆಲ್ಲಾ
ಉಪಯೋಗಿಸಿಕೊಂಡು ಪ್ರಕೃತ್ತಿಯ
ವಿನಾಶಕ್ಕೆ ಕಾರಣವಾಗುತ್ತಾನೆ.
ನಮ್ಮ ಸುಸ್ಥಿರ ಬದುಕಿಗೆ
ಪರಿಸರವಲ್ಲವೇ ಅಡಿಪಾಯ ?
ಪರಿಸರದಲ್ಲಿ
ಒಂದಾಗಿರುವ ಮನುಷ್ಯರು ಪರಿಸರವಿದ್ದರೆ
ಜೀವಿಸಬಹುದು. ಪರಿಸರವೇ
ಇಲ್ಲದಿದ್ದರೆ ಅವರಿಗೆ ಜೀವಿಸಲು
ಸಾದ್ಯವಿಲ್ಲ. ಮರಗಿಡಗಳನ್ನು
ಕಡಿದರೆ ಮೊದಲ ಹಾನಿ ಪ್ರಾಣಿ
ಪಕ್ಷಿಗಳಿಗೆ, . ಬಳಿಕ
ಆ ಹಾನಿ ಮನುಷ್ಯರಿಗೆ ತಟ್ಟುತ್ತದೆ.
ಮನುಷ್ಯನ
ಜೀವನಕ್ಕೆ ಮರಗಿಡಗಳು ಅತ್ಯಾವಶ್ಯಕ.
"ವನ ಸಮೃದ್ದಿಯಿಂದ
ಜಲ ಸಮೃದ್ಧಿ" ಎ೦ಬ
ಘೋಷಣಾ ವಾಕ್ಯವು ನಮಗೆ ಹಲವಾರು
ವಿಷಯಗಳನ್ನು ತಿಳಿಸುತ್ತದೆ.
ಮರಗಡಗಳು ಸಮೃದ್ದಿಯಿಂದ
ಬೆಳೆಯುವಲ್ಲಿ ಅರಣ್ಯ ಸಂಪತ್ತು
ಯಥೇಚ್ಚವಾಗಿ ಲಭಿಸುವುದು.
ಕಾಡಿದ್ದರೆ ಕಾರ್ಮೋಡ
ಎ೦ಬ
ಗಾದೆಯಿದೆ. ಮಳೆಗಾಳಿಗಳ
ಪರಿಣಾಮವಾಗಿ ನೆಲದ ಮಣ್ಣು
ಕೊಚ್ಚಿಕೊಂಡು ಒಂದೆಡೆಯಿಂದ
ಇನ್ನೊಂದೆಡೆಗೆ ಹೋಗುತ್ತದೆ.
ಹೀಗೆ ಕೊಚ್ಚಿಕೊಂಡು
ಹೋಗುವುದನ್ನು ಕಾಡುಗಳು ತಡೆಯುವುದು
ಎಂದು ಹೇಳುತ್ತಾರೆ.
ಭೂಮಿಯಲ್ಲಿರುವ
ಸಂಪನ್ಮೂಲಗಳನ್ನು ಯಥೇಚ್ಚವಾಗಿ
ಬಳಸುವುದರಿಂದ ಅದು ನಾಳೆಗೆ
ಮುಗಿದು ಹೋಗುತ್ತದೆ. ಪೆಟ್ರೋಲಿಯಂ,
ಡೀಸೆಲ್ ಇದಕ್ಕೆ
ಉದಾಹರಣೆಯಾಗಿದೆ. ಕೇವಲ
ಮುಗಿದು ಹೋಗುವುದು ಮಾತ್ರವಲ್ಲ
ಅದರ ಅತಿಯಾದ ಬಳಕೆಯು ವಾಯು
ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಇದು ಸುಸ್ಥಿರ ಬದುಕಿಗೆ
ಬಹುದೊಡ್ಡ ಕಾರ್ಯವೆನ್ನಿಸಬಹುದು.
ವಾಯುಮಾಲಿನ್ಯದ
ಪರಿಣಾಮವಾಗಿ ಮಾನವನ ಆರೋಗ್ಯ
ಕ್ಷೇತ್ರಕ್ಕೆ ಏರುಪೇರು ಉಂಟಾಗಬಹುದು.
ಇದೇ ರೀತಿ ನಾವು ಬಳಸುವಂತಹ
ಟೆಲಿಫೋನ್ ಮೊಬೈಲ್ ಗಳ ಅತಿಯಾದ
ಬಳಕೆಯು ನಮ್ಮ ಮುಂದಿನ ಜೀವನಕ್ಕೆ
ಏರುಪೇರನ್ನು ಂಟು ಮಾಡಬಹದು.
ಮೊಬೈಲ್ ಬಳಕೆಯಿಂದ
ಮಾನವನು ಇದರಲ್ಲೇ ತೊಡಗಿಸಿಕೊಂಡು
ಏಕಮುಖಿಯಾಗಿ ಬಾಳುವನು.
ಮಾತ್ರವಲ್ಲದೇ ಇತರರ
ಸ್ನೇಹ ಸಂಬಂಧವನ್ನು ಕಳೆದುಕೊಳ್ಳುವನು.
ಇದು ಅವನ ಮಾನಸಿಕ
ಅಸ್ಥಿತ್ವಕ್ಕೆ ಕಾರಣವಾಗಬಹುದು.
"ಇ"ತಾಜ್ಯಗಳಂತು
ಪರಿಸಕ್ಕೆ ಇಂದು ಹೊರಲಾಗದ
ಭಾರವಾಗುತ್ತಿದೆ. ನಾವು
ಬಳಸುವಂತಹ ಅತ್ಯಾಧುನಿಕತೆಯ
ಸೋಗಿನ ಉಪಕರಣಗಳೆಲ್ಲವೂ ಕೆಲಕಾಲದ
ನಂತರ "ಇ"
ತಾಜ್ಯಗಳಾಗುತ್ತಿವೆ.
ಭೂಗರ್ಭದ ಮಡಿಲಲ್ಲಿ
ಇದು ಎಲ್ಲಿ ತುಂಬಬಹುದು. ಹೊಟ್ಟೆ
ಬಿರಿಯುವಷ್ಚು ಉಂಡರೆ ಹೊಟ್ಟೆ
ಬಿರಿದು ಹೋಗುವುದು ಖಂಡಿತಾ ಸತ್ಯ.
ಆದ್ದರಿಂದ ತಾಯಿ
ಗರ್ಭವನ್ನು ಶುದ್ದೀಕರಿಸುವುದು
ನಮ್ಮೆಲ್ಲರ ಕರ್ತವ್ಯವಾಗಿದೆ.
ನಾವು
ಸುಸ್ಥಿರವಾಗಿ ಬದುಕಬೇಕಾದರೆ
ನಮ್ಮ ಸುತ್ತಮುತ್ತಲಿನ ಪರಿಸರ
ಸ್ವಚ್ಚತೆಯಿಂದ ಕೂಡಿರಬೇಕು.
ಮಾತ್ರವಲ್ಲ ನಿರ್ಮಲವಾಗಿರಬೇಕು.
ಪರಿಸರ ಸ್ವಚ್ಚವಾಗಿದ್ದರೆ
ಸಾಲದು ವ್ಯಕ್ತಿ ಶುಚಿತ್ವವೂ ಬಹಳ
ಮುಖ್ಯವಾಗಿದೆ. ಪ್ರತಿ.ಯೊಬ್ಬ
ವ್ಯಕ್ತಿಯೂ
ಇತರ
ವ್ಯಕ್ತಿಯೊಂದಿಗೆ ಸ್ನೇಹ ಸಂಬಂಧವನ್ನು
ಬೆಳೆಸಿಕೊಂಡರಬೇಕು. ಅದೇ
ರೀತಿ ಮರಗಿಡಗಳನ್ನು ನೆಟ್ಟು
ಪ್ರಾಣಿ ಸಂಕುಲ ಮತ್ತು ಜೀವವೈವಿದ್ಯಗಳ
ಉಳಿವಿಗೆ ಕಾರಣರಾಗೋಣ.
ಇದೀಗ
ದಿನದಿಂದ ದಿನಕ್ಕೆ ಜನಸಂಖ್ಯಾ
ಹೆಚ್ಚಳ ಉಂಟಾಗಿ ವಾಸಸ್ಥಳಕ್ಕೆ
ಕೊರತೆ ಉಂಟಾಗುತ್ತಿದೆ. ಹೆಚ್ಚು
ಹೆಚ್ಚು ಕಟ್ಟಡ ನಿರ್ಮಾಣ,
ನಗರೀಕರಣಗಳಿಂದ
ಅರಣ್ಯಸಂಪತ್ತು ನಾಶವಾಗುತ್ತಿದೆ.
ಇದೀಗ ಅರಣ್ಯ ನಾಶದಿಂದಾಗಿ
ಶುದ್ಧ ವಾಯುವಿನ ಕೊರತೆ ಉಂಟಾಗುತ್ತಿದೆ.
ವಾಯು ಮಾಲಿನ್ಯ,
ಜಲಾಮಾಲಿನ್ಯ,
ಮಣ್ಣುಮಾಲಿನ್ಯ,
ಶಿಲಾಮಾಲಿನ್ಯಗಳುಂಟಾಗುತ್ತಿದೆ.
ಇಂತಹ ಪರಿಸರದ ಜೊತೆ
ನಾವು ಮುಂದಿನ ಸುಸ್ಥಿರ ಬದುಕು
ನಡೆಸಲು ಸಾಧ್ಯವೇ????
ಇವುಗಳಲ್ಲಿ
ಸುಸ್ಥಿರ ಬದುಕು ನಡೆಸಲು ಪರಿಸರಕ್ಕೆ
ಸಂಬಂಧಿಸಿ ಮಾತ್ರವಲ್ಲ ಇನ್ನೂ
ಹಲವಾರು ಸಮಸ್ಯೆಗಳಿವೆ. ಅವುಗಳು
ಕೋಮುವಾದ, ಭಾಷಾವಾದ,
ಜಾತೀಯತೆ, ಪ್ರಾದೇಶಿಕ
ಕೂಗು, ಭಯೋತ್ಪಾದನೆ,
ವಾಸಸ್ಥಳದ ಕೊರತೆ,
ಶುದ್ಧ ವಾಯುವಿನ ಕೊರತೆ,
ಮಾತ್ರವಲ್ಲ ಮಾನವನು
ಮಾನಸಿಕವಾಗಿ ಖಿನ್ನತೆಗೆ
ಗುರಿಯಾಗುತ್ತಾನೆ. ಇತರರೊಂದಿಗಿರುವ
ಪ್ರೀತಿ ವಿಶ್ವಾಸಗಳು ದೂರವಾಗಿ
ಇದೀಗ ಮಾನವನು ಒಂಟಿತನ ಕಾಡಬಹುದು.
ಇವುಗಳಿಗೆಲ್ಲಾ
ಪರಿಹಾರವೆಂದರೆ ನಾವು ಮೊತ್ತಮೊದಲಾಗಿ
ಪರಿಸರ ಸ್ನೇಹಿಯಾಗಿ ಬಾಳಬೇಕು.
ಪರಿಸರವನ್ನು ಉಳಿಸಿ
ಬೆಳೆಸಿ
ಬಾಳಬೇಕು. ಏನಿಲ್ಲದಿದ್ದರೂ
ಮುಂದಿನ ಜನಾಂಗಕ್ಕೆ ಪರಿಶುದ್ಧವಾದ
ನೀರು, ಮಲಿನಗೊಳ್ಳದ
ಗಾಳಿ, ಸ್ವಚ್ಚ
ಸಮುದ್ರ, ನೀಲಿ
ಆಕಾಶಗಳನ್ನು ಬಿಟ್ಟು ಹೋಗುವುದು
ನಮ್ಮೆಲ್ಲರ ಛಲವಾಗಿರಬೇಕು.
ಅದಕ್ಕೆ ನಾವು ನೀವೆಲ್ಲರೂ
ಸಿದ್ಧರಾದರೆ ಮಾತ್ರ ಸಾಧ್ಯ.
ಪರಿಸರವನ್ನು ನೆಟ್ಟು
ಬೆಳೆಸಿ ಅದನ್ನು ಪೋಷಿಸಿದರೆ ಅದು
ದೊಡ್ಡ ಅರಣ್ಯವಾಗಿ ಬೆಳೆದರೆ ಅದರ
ಮೊದಲ ಪ್ರಯೋಜನ ಮಾನವನಿಗಾಗಿದೆ.
ಆದ್ದರಿಂದ ಇದುವೇ
ಮನುಕುಲಕ್ಕೆ ಹಾಗೂ ನಮ್ಮ
ಸುತ್ತಮುತ್ತಲಿನ ಪರಿಸರಕ್ಕೆ
ತೋರಿಸುವ ನಿಜವಾದ ಕಾಳಜಿಯಾಗಿದೆ.
No comments:
Post a Comment