ಎಲ್ಲಿ
ನೋಡಿದರಲ್ಲಿ ಕಾಣುತಿದೆ
    ಬೆಂದು
ಹೋದ ನಮ್ಮ ನಾಡು
    ಬಳಲಿ
ಬಾಯಾರಿ ಬಸವಳಿಯುತಿದೆ
    ಪಕ್ಷಿ
ಪ್ರಾಣಿ ಸಂಕುಲದ ಬೀಡು
                     ಮಳೆ
ಮೋಡದ ಸುಳಿವೇ ಇಲ್ಲ
                     ವಿಶಾಲ
ನೀಲ ಆಗಸದಲ್ಲಿ 
                     ತುಂತುರು
ಹನಿಗೂ ಗತಿಯಿಲ್ಲ
                     ರೈತನ
ಮೊಗದಲಿ ನಗುವಿಲ್ಲ.
     ಓ
ಪ್ರಕೃತಿ ಮಾತೆ ಏಕೆ ಮುನಿದಿರುವೆ
     ಮಳೆ
ಸುರಿಸು ಜೀವನವ ಕೊಡಿಸು
    ನಿನ್ನ
ದಯೆಗೆ ಇಡೀ ಜೀವಕುಲ ಕಾದಿವೆ
    ಜೀವ
ಹೋಗುವ ಮುನ್ನ ದಯಮಾಡಿಸು
 
 
No comments:
Post a Comment